Our Gallery
Asthana vidvamsa Assigning program
ಶೃಂಗೇರಿ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ಮತ್ತು ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಅನುಗ್ರಹ ಆಶೀರ್ವಾದದೊಂದಿಗೆ ಆವನೀ ಮಠಾಧಿಶರಾದ ಶ್ರೀ ಶ್ರೀ ಅದ್ವೈತಾನಂದ ಭಾರತೀ ಸ್ವಾಮಿಗಳು ಆವನೀ ಶೃಂಗೇರಿ ಶಂಕರಮಠದ ಆಸ್ಥಾನ ವಿದ್ವಾಂಸರಾಗಿ ವೇದ ಬ್ರಹ್ಮಶ್ರೀ ಚಂದ್ರಕಾಂತ ಸೋಮಯಾಜಿಗಳವರನ್ನು ನಿಯುಕ್ತಿಗೊಳಿಸಿದ್ದಾರೆ.
ಇಂದು ಪತ್ರವನ್ನು ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ಬಳ್ಳಾರಿಯಲ್ಲಿ ಅನುಗ್ರಹಿಸಿದರು.
ಮಂಡ್ಯ ಜಿಲ್ಲೆಯ ಮಾದಾಪುರದವರಾದ ಶ್ರೀಮತಿ ಲೀಲಾವತಿ ಮತ್ತು ನಂಜುಂಡಸ್ವಾಮಿ ದಂಪತಿಗಳ ಪುತ್ರರಾದ ವೇದ ಬ್ರಹ್ಮಶ್ರೀ ಚಂದ್ರಕಾಂತ ಸೋಮಯಾಜಿಗಳವರು ಶೃಂಗೇರಿಯಲ್ಲಿ ವೇದ, ಸಂಸ್ಕೃತ, ಪೂರ್ವಮೀಮಾಂಸಾ ಶಾಸ್ತ್ರ ತಿರುಪತಿಯಲ್ಲಿ ಶ್ರೌತ ಅಧ್ಯಯಯವನ್ನು ಮಾಡಿರುತ್ತಾರೆ.
2013 ರಲ್ಲಿ ಅಗ್ನಿ ಆಧಾನ 2018 ರಲ್ಲಿ ಸೋಮಯಾಗವನ್ನು ನೆರವೇರಿಸಿ ಸೋಮಯಾಜಿಗಳಾಗಿದ್ದಾರೆ ಕೇರಳ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿರುತ್ತಾರೆ. ನಿತ್ಯಾಗ್ನಿಹೋತ್ರಿಗಳಾಗಿ ಪ್ರಸ್ತುತ ಬೆಂಗಳೂರಿನ “ಸನಾತನ ಸದ್ವಿದ್ಯಾ” ಪಾಠಶಾಲೆಯಲ್ಲಿ ಪ್ರಾಂಶುಪಾಲರಾಗಿದ್ದಾರ



Sanyasaswikara Samarambha




